Extra Validity Offer - Jio ಗ್ರಾಹಕರಿಗೊಂದು ಸಂತಸದ ಸುದ್ದಿ, ಇದೀಗ 30 ದಿನ ಹೆಚ್ಚು ನಡೆಯಲಿದೆ ಈ ಪ್ಲಾನ್

Extra Validity Offer - ಒಂದು ವೇಳೆ ನೀವೂ ಕೂಡ ರಿಲಯನ್ಸ್ ಜಿಯೋ (Reliance Jio) ಬ್ರಾಡ್ ಬ್ಯಾಂಡ್ ಬಳಕೆದಾರರಾಗಿದ್ದರೆ (Broadband Users), ಈ ಸುದ್ದಿ ನಿಮಗೆ ಭಾರಿ ಉಡುಗೊರೆಯಾಗಲಿದೆ. 

Written by - Nitin Tabib | Last Updated : Apr 7, 2021, 06:58 PM IST
  • ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ಪ್ರಕಟಿಸಿದ ರಿಲಯನ್ಸ್ ಜಿಯೋ.
  • ಈ ಪ್ಲಾನ್ಗಳ ಜೊತೆಗೆ ಗ್ರಾಹಕರಿಗೆ 30 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ನೀಡಿದ ಜಿಯೋ.
  • ಈ ಪ್ಲಾನ್ ಗಳ ಹೆಚ್ಚಿನ ವಿವರ ತಿಳಿದುಕೊಳ್ಳಲು ಸುದ್ದಿ ಓದಿ.
Extra Validity Offer - Jio ಗ್ರಾಹಕರಿಗೊಂದು ಸಂತಸದ ಸುದ್ದಿ, ಇದೀಗ 30 ದಿನ ಹೆಚ್ಚು ನಡೆಯಲಿದೆ ಈ ಪ್ಲಾನ್ title=
Extra Validity Offer (File Photo)

Extra Validity Offer - ಒಂದು ವೇಳೆ ನೀವೂ ಕೂಡ ರಿಲಯನ್ಸ್ ಜಿಯೋ (Reliance Jio) ಬ್ರಾಡ್ ಬ್ಯಾಂಡ್ ಬಳಕೆದಾರರಾಗಿದ್ದರೆ (Broadband Users), ಈ ಸುದ್ದಿ ನಿಮಗೆ ಭಾರಿ ಉಡುಗೊರೆಯಾಗಲಿದೆ. JioFiber ನ ಅರ್ಧವಾರ್ಷಿಕ ಹಾಗೂ ವಾರ್ಷಿಕ ಪ್ಲಾನ್ ಗಳ ಅವಧಿಯಲ್ಲಿ 30 ದಿನ ವ್ಯಾಲಿಡಿಟಿ ಹೆಚ್ಚಿಸಲಾಗಿದೆ  ( 30  Days Extra Validity). ಅಂದರೆ ಜಿಯೋದ ಈ ಪ್ಲಾನ್ಗಳ ಜೊತೆಗೆ ನಿಮಗೆ ಹೆಚ್ಚುವರಿ ವ್ಯಾಲಿಡಿಟಿ ಲಾಭ ಸಿಗಲಿದೆ.

ಈ ಆಫರ್ ಅಡಿ ನೀವು JioFiber (Reliance JioFiber)ನ ವಾರ್ಷಿಕ ಯೋಜನೆಯನ್ನು ತೆಗೆದುಕೊಂಡರೆ, ನಿಮಗೆ 30 ದಿನಗಳು ಮತ್ತು ಅರ್ಧವಾರ್ಷಿಕ ಯೋಜನೆಯನ್ನು ಪಡೆದುಕೊಂಡರೆ ದಿನವನ್ನು 15 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಹೊಂದಲಿರುವಿರಿ. ಟೆಲಿಕಾಂಟಾಕ್‌ನ ವರದಿಯ ಪ್ರಕಾರ, ಹೊಸ ಕೊಡುಗೆ (Extra Validity Offer)ಜಿಯೋಫೈಬರ್‌ನ ಅರೆ ವಾರ್ಷಿಕ ಮತ್ತು ವಾರ್ಷಿಕ ಯೋಜನೆಗಳಿಗೆ (Semi-Annual and Annual Plans) ಮಾತ್ರ ಅನ್ವಯಿಸುತ್ತದೆ. ಇದು ಈಗಾಗಲೇ ಜಿಯೋ ಫೈಬರ್ ವೆಬ್‌ಸೈಟ್‌ನ 'ಯೋಜನೆಗಳು' ವಿಭಾಗದಲ್ಲಿ ಇದನ್ನು ನೀವು ಕಾಣಬಹುದು ಮತ್ತು  ಈ ಕೊಡುಗೆಗಳ ಲಾಭವನ್ನು ನೀವು ಪಡೆಯಬಹುದು. ಕಳೆದ ವರ್ಷ ಆಗಸ್ಟ್‌ನಲ್ಲಿ ಜಿಯೋ ಫೈಬರ್ ತನ್ನ ಯೋಜನೆಗಳನ್ನು ನವೀಕರಿಸಿದೆ. ಅದರ ನಂತರ ಜಿಯೋ ಫೈಬರ್ ಯೋಜನೆಯ ಆರಂಭಿಕ ಬೆಲೆ 399 ರೂ. ನಿಗದಿಪಡಿಸಲಾಗಿದೆ.

ಇದನ್ನೂ ಓದಿ-ಈ Prepaid planಗಳಲ್ಲಿ ಸಿಗಲಿದೆ ಪ್ರತಿದಿನ 3 GB Data

Jioನ ಈ ಪ್ಲಾನ್ಗಳ ಮೇಲೆ ಈ ಕೊಡುಗೆ ಅನ್ವಯ
ಜಿಯೊದ (Jio) ಈ ಎಕ್ಸ್ಟ್ರಾ ವ್ಯಾಲಿಡಿಟಿ ಕೊಡುಗೆ ರೂ. 4,788  ರಿಂದ 1,01,988 ರೂ.ಗಳ ವಾರ್ಷಿಕ ಪ್ಲಾನ್ ಗಳಿಗೆ ಗೆ ಅನ್ವಯಿಸಲಿದೆ. ಆರು ತಿಂಗಳ ಪ್ಲಾನ್ ಗಳ ಕುರಿತು ಹೇಳುವುದಾದರೆ, ಈ ಕೊಡುಗೆ ರೂ.2394 ರಿಂದ ರೂ.50,994  ವರೆಗಿನ ಪ್ಲಾನ್ ಗಳಿಗೆ ಅನ್ವಯಿಸಲಿದೆ.

ಇದನ್ನೂ ಓದಿ-ಮಕ್ಕಳಿಗಾಗಿಯೇ ಮಾರುಕಟ್ಟೆಗೆ ಬಂದಿದೆ ಅಗ್ಗದ laptop, ತಿಳಿಯಿರಿ HP Chromebook 11a ವೈಶಿಷ್ಟ್ಯ

JioFiber ಪ್ಲಾನ್ (JioFiber Plans) ಅಡಿ ಎಷ್ಟು ಡೇಟಾ ಸಿಗುತ್ತದೆ
JioFiber ನ ಈ ಎರಡೂ ಯೋಜನೆಗಳೊಂದಿಗೆ, ನೀವು 30 Mbps ಆರಂಭಿಕ ವೇಗದೊಂದಿಗೆ ಅನಿಯಮಿತ ಡೇಟಾವನ್ನು ಪಡೆಯಬಹುದು. ಈ ಯೋಜನೆಯ ಇಂಟರ್ನೆಟ್ ವೇಗವು 1 GBPS ವರೆಗೆ ಇರಲಿದೆ.  ಈ ವಾರ್ಷಿಕ ಮತ್ತು ಅರ್ಧ ವಾರ್ಷಿಕ ಎರಡೂ ಯೋಜನೆಗಳು ಒಟಿಟಿ ಪ್ಲಾಟ್‌ಫಾರ್ಮ್‌ಗಳಾದ ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ + ಹಾಟ್‌ಸ್ಟಾರ್, ವೂಟ್ ಸೆಲೆಕ್ಟ್, ಲಯನ್ಸ್‌ಗೇಟ್ ಪ್ಲೇ ಮತ್ತು ಡಿಸ್ಕವರಿ + ಗೆ ಚಂದಾದಾರಿಕೆಗಳನ್ನು ಒಳಗೊಂಡಿವೆ.

ಇದನ್ನೂ ಓದಿ-Facebook CEO Mark Zuckerberg ಫೋನ್ ನಂಬರ್ ಮಾಹಿತಿ ಸೋರಿಕೆ, Signal App ಬಳಸುತ್ತಾರಂತೆ !

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News